Presenting you the fourth play of the series “Rangadamele Rangatanda – A theatre extravaganza”
ನವೋದಯ, ಮೈಸೂರು ಅರ್ಪಿಸುವ
Navodaya Mysuru Presents
ವಾಲ್ಮೀಕಿ ರಾಮಾಯಣ ಆಧಾರಿತ ನಾಟಕ
A Play based on Vaalmiki Ramayana
‘ಅರಣ್ಯ ಕಾಂಡ’ / Aranya Kanda
Sita and Rama spent the first thirteen years of their exile like loves, not like a couple. The youth knew it was inappropriate to procreate during their stay in the forest. Hence, Aranyakanda is also an extraordinary love story.
It’s a necessity for a play to have contradiction. Here, Infatuation is shown as opposed to Love. Shoorpanakhi is beautiful. If Seetha is brown skinned beauty Shoorpanakhi is dark skinned beauty. She gets infatuated with Rama. Sita’s love is giving but Shoorpanakhi’s infatuation is demanding.
Rama is a noble warrior who never lets go of his honour. Him being an Arya doesn’t make him superior and she being an asura doesn’t make her inferior. Come, let us look at The Ramayana from a new perspective.
ಸೀತಾರಾಮರು ತಮ್ಮ ವನವಾಸದ ಮೊದಲ ಹದಿಮೂರು ವರ್ಷ ಪ್ರೇಮಿಗಳಂತೆ ಕಳೆದರು, ದಂಪತಿಗಳಂತಲ್ಲ. ಅರ್ಥಾತ್ ವನವಾಸದಲ್ಲಿ ಮಗು ಮಾಡುವುದು ಸಾಧುವಲ್ಲ ಎಂಬ ಅರಿವಿದ್ದ ಯುವಕರವರು. ಹಾಗಾಗಿ ಅರಣ್ಯಕಾಂಡವು ಒಂದು ಅಸಾಧಾರಣ ಪ್ರೇಮ ಕಥೆಯೂ ಹೌದು.
ಎಲ್ಲ ನಾಟಕಗಳಲ್ಲಿ ನಾಟಕೀಯ ವೈರುಧ್ಯ ಅಗತ್ಯ. ಇಲ್ಲಿ ಪ್ರೇಮಕ್ಕೆ ಪ್ರತಿಯಾಗಿ ಮೋಹವನ್ನು ನಿಲ್ಲಿಸಲಾಗಿದೆ, ಸೀತೆಗೆ ಪ್ರತಿಯಾಗಿ ಶೂರ್ಪನಖಿಯನ್ನು ನಿಲ್ಲಿಸಲಾಗಿದೆ. ಶೂರ್ಪನಖಿ ಸುಂದರಿ, ಸೀತೆ ಗೋಧಿಬಣ್ಣದ ಸುಂದರಿಯಾದರೆ ಶೂರ್ಪನಖಿ ರಾಗಿಬಣ್ಣದ ಸುಂದರಿ, ರಾಮನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಅವಳದ್ದು ಮೋಹ. ಸೀತೆಯುದು ಕೊಡುವ ಪ್ರೀತಿಯಾದರೆ ಶೂರ್ಪನಖಿಯದು ಬೇಡುವ ಮೋಹ.
ರಾಮ, ಮರ್ಯಾದೆ ಕಾಪಿಟ್ಟುಕೊಂಡು ಬರುವ ಒಬ್ಬ ಸರಳ ಸಜ್ಜನ ಯುವಕ. ವಿಚಲಿತನಾಗದ ಧೀರ. ಅವನು ಆರ್ಯನೆನ್ನುವುದು ಅವನ ಹಿರಿಮೆಯಲ್ಲ, ಶೂರ್ಪನಖಿ ಅಸುರಳೆಂಬುದು ಇವಳ ಕೀಳರಿಮೆಯಲ್ಲ. ಬನ್ನಿ, ರಾಮಾಯಣವನ್ನು ಹೊಸರೀತಿಯಿಂದ ನೋಡಿ ಆನಂದಿಸೋಣ.