About Us

Rangasthe is a team strengthened by theatre enthusiastic youths. The team embraces largely students and theatre passionate youths and works on alluring students towards the world of theatre. The team has completed five glorious years under the serene guidance of its founder, Sri Dhanush N.

It is engrossing to note that all the plays performed are exclusive productions of the team adopting new/inventive scripts from aspiring and experienced writers from Kannada literature fraternity. This remarkable strategy of the team has provided great opportunities for many budding writers gaining appreciation for the same. The team’s success is a commemoration of contributions by various theatre artists, technicians, directors and backstage support.

The team continues to celebrate the art, tradition & literature of Karnataka, on top of delineating social concerns by virtue of its productions/street plays. Rangasthe, as the name suggests in Kannada, (ranga – stage, asthe – faith/interest) has consistently endorsed the theatre virtues and has survived many uncertainties to be acclaimed as a prominent theatre group in Bengaluru.

Team Rangasthe has staged more than 9 theatrical productions inclusive of more than 75 stage performances and as good as 45 street play performances addressing social ordeals, significance of Kannada language etc. The team has won two state awards at ‘Rangashri’ organised drama competition and festival, furthermore gaining immense popularity amongst the diverse audience.


Rangasthe has hosted several theatre teams from across the state and has organized theatre festivals. Several plays organized by the team were;

Kaniveya Nelalalli

Ucchishta

Santa Shishunaala Shareefa

Mrutyorma

Several plays were staged at Rangasthe Rangotsava, a three day theatre festival organized by the team.

Sidewing’s “Naayikathe”

Samashti’s “Mukkam post Bombilavaadi”

Rangasthe’s “Kaadhu katheyaadavaru”


Book release ceremony

Team had the opportunity to host Shri Hoolishekar for the book release ceremony of his collection of plays “Hoolishekar Naatakagalu”, which was released by the Jnanapita awardee & a renowned kannada writer and poet ‘Shri Chandrashekar Khambar’.


ತಂಡವು 2016 ನೇ ಇಸವಿಯಿಂದ ಪ್ರಸ್ತುತದವರೆಗೂ ಬೆಂಗಳೂರಿನ ಹಲವಾರು ರಂಗಾಸಕ್ತರಿಗೆ ವೇದಿಕೆ ಒದಗಿಸಿ ಹೊಸಬರ ನಾಟಕಗಳಿಗೆಯೇ ಹೆಚ್ಚು ಪ್ರಾಮುಖ್ಯತೆ ನೀಡಿ ಹಳೆಬೇರು ಹೊಸಚಿಗುರು ಎಂಬ ನಾಣ್ಣುಡಿಯಂತೆ ಅದನ್ನು ಪಾಲಿಸುತ್ತ ಬಂದಿದೆ. ತಂಡದಲ್ಲಿ ಈವರೆಗೂ ಹಲವಾರು ನಟ ನಟಿಯರು, ನಿರ್ದೇಶಕರು, ತಂತ್ರಙ್ಞರು, ಮತ್ತು ತೆರೆಹಿಂದೆ ಸಾಕಷ್ಟು ಮಂದಿ ಕೆಲಸ ಮಾಡಿ ತಂಡವನ್ನು ಉನ್ನತ ಸ್ಥಾನಕ್ಕೇರಿಸಿದ್ದಾರೆ. ಹೊಸ ಬರಹಗಾರರಿಗೆ ಅವಕಾಶ ಒದಗಿಸುತ್ತಾ ಅದನ್ನೇ ಪ್ರದರ್ಶನ ಮಾಡುವಮೂಲಕ ಪ್ರೇಕ್ಷರ ಮೆಚ್ಚುಗೆಗೂ ಪಾತ್ರವಾಗಿದೆ ಸಾಮಾಜಿಕ ಕಳಕಳಿಯೊಂದಿಗೆ ನಾಟಕದ ಮುಖೇನ ಹಲವಾರು ಜನಜಾಗೃತಿ ಕೆಲಸ ಮಾಡುವಲ್ಲಿ ತಂಡ ಹಿಂದೆ ಬಿದ್ದಿಲ್ಲ. ಕನ್ನಡನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಯೇ ರಂಗಾಸ್ತೆಯ ಮುಖ್ಯ ಧ್ಯೇಯವಾಗಿದೆ, ಹೆಸರೇ ಸೂಚಿಸುವಂತೆ ರಂಗದ ಮೇಲಿನ ಆಸ್ಥೆ ಯನ್ನು ಯಾವುದೇ ಅಡಚಣೆಗಳ ನಡುವೆಯೂ ಪಾಲಿಸುತ್ತಾ ಬೆಂಗಳೂರಿನ ಪ್ರಖ್ಯಾತ ಹವ್ಯಾಸಿ ರಂಗತಂಡವೆಂಬ ಹೆಸರಿಗೆ ಖ್ಯಾತಿಯಾಗಿದೆ ಪ್ರಬಲವಾಗಿ ವಿದ್ಯಾರ್ಥಿಗಳನ್ನೇ ಹೆಚ್ಚಾಗಿ ಹೊಂದಿರುವ ತಂಡದಲ್ಲಿ ಹಲವಾರು ಯುವಕ ಯುವತಿಯರು ತಮ್ಮ ನೆಲೆಕಂಡುಕೊಳ್ಳುವಲ್ಲಿ ರಂಗಭೂಮಿ ಮತ್ತು ರಂಗಾಸ್ಥೆ ಸದಾ ಅವರ ಬೆನ್ನ ಹಿಂದೆ ನಿಂತಿದೆ.

ಆಯೋಜನೆ

ತಂಡವು ತನ್ನ ಸ್ವಂತ ಸದಸ್ಯರೊಂದಿಗೆ ನಾಟಕವನ್ನು ಮಾಡಲಾಗದಿದ್ದರೂ ಸಹ ಇತರೆ ತಂಡಗಳಿಗೆ ನಾಟಕವನ್ನು ಕಳೆದ ಹಲವು ವರ್ಷಗಳಿಂಧ ಆಯೋಜಿಸುತ್ತ ಬಂದಿದೆ

ಕಣಿವೆಯ ನೆಳಲಲ್ಲಿ

ಉಚ್ಛಿಷ್ಠ

ಸಂತ ಶಿಶುನಾಳ ಶರೀಫ

ಮೃತ್ಯೋರ್ಮ

ಪ್ರತ್ಯೇಕವಾಗಿ 2019 ರಲ್ಲಿ ರಂಗೋತ್ಸವವನ್ನು ಆಯೋಜಿಸಿ ಮೂರು ನಾಟಕಗಳನ್ನು ಪ್ರದರ್ಶಿಸಲಾಯಿತು.

ನಾಯಿಕತೆ

ಮುಕ್ಕಾಂಪೋಸ್ಟ್‌ ಬೊಂಬಿಲವಾಡಿ

ರಂಗಾಸ್ಥೆಯ ನಾಟಕವಾದ ʼಕಾದು ಕತೆಯಾದವರುʼ

ಪುಸ್ತಕ ಬಿಡುಗಡೆ ಸಮಾರಂಭ

ಖ್ಯಾತ ಬರಹಗಾರರು, ನಾಟಕಕಾರರು ಆದ ಹೂಲಿಶೇಖರ್‌ ರವರು ರಚಿತ ನಾಟಕಗಳನ್ನು     “ಹೂಲಿಶೇಖರರ ನಾಟಕಗಳು “ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಉದ್ಧೇಶ ಹೊಂದಿದ್ದ ತಂಡಕ್ಕೆ ಅದರ ಕಾರ್ಯಕ್ರಮವನ್ನು ಮಾಡುವ ಸಂದರ್ಭ ಒದಗಿ ಬಂದಾಗ ನಾಡಿನ ಪ್ರಸಿದ್ಧ ಕವಿಗಳು ಙ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಆದ ಶ್ರೀಯುತ ಡಾ.ಚಂದ್ರಶೇಖರ ಕಂಬಾರ ಅವರ ಕರಗಳ ಮೂಲಕ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಪ್ರಶಸ್ತಿಗಳು

ನಾವು ನಾಟಕ ಮಾಡ್ತಿಲ್ಲ ನಾಟಕಕ್ಕೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿ ಮತ್ತು ಪ್ರೇಕ್ಷಕರ ಮೆಚ್ಚುಗೆಯ ನಾಟಕ ಪ್ರಶಸ್ತಿ ಮತ್ತು ಒಟ್ಟು ರಾಜ್ಯಾದ್ಯಂತ ಸುಮಾರು 15 ಪ್ರದರ್ಶನಗಳ ಕಂಡು ಯಶಸ್ವಿ ನಾಟಕವಾಗಿದೆ.

ನಮ್ಮೂರ ರಾಮಾಯಣ ನಾಟಕವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸಮಯವು ಹೆಚ್ಚಾಗಿ ನಾಟಕವು ಸ್ಪರ್ಧೆಯಿಂದ ಆಚೆ ಉಳಿದರೂ ಸಹ ತೀರ್ಪುಗಾರರ ಮೆಚ್ಚುಗೆಯ ನಾಟಕವಾಗಿ ಮತ್ತು ಪ್ರೇಕ್ಷಕರ ಮೆಚ್ಚುಗೆಯಾಗಿ  ನಾಟಕವು ಯಶಸ್ವಿಯಾಯಿತು