Paaka Kranthi

ಪಾಕಕ್ರಾಂತಿ

Vishwapatha Kala sangama presents “Paka Kranthi”, a play written by K P Poornachandra Tejaswi and directed by Ashok B

ಪಾಕಕ್ರಾಂತಿ ಕತೆಯು ಅತಿ ಚೆನ್ನಾಗಿ ಮೂಡಿ ಬಂದಿದೆ. ತಮ್ಮ ಪ್ರೀಯ ಪತ್ನಿ ಮನೆಯಲ್ಲಿರದಾಗ ಲೇಖಕ ತಾನೇನು ಮಾಡದಂತಹ ಕೆಲಸವೇ ಇದು ಅಂತ ತಿಳಿದುಕೊಂಡು ಪಾಕಶಾಸ್ತ್ರಕ್ಕೆ ಕೈ ಹಾಕುತ್ತಾರೆ. ಅದರಲ್ಲಿ ಅವರಿಗೆ ಎದರಾಗುವ ಸವಾಲುಗಳು ನಮಗೆ ಮಜಾ ನೀಡುತ್ತವೆ. ಆ ಸಮಯದಲ್ಲಿ ಅವರಿಗೆ ತಲೆ ನೋವಾದರೂ ನಮಗೆ ತಿಳಿಹಾಸ್ಯ.
ಸುವರ್ಣ ಸಪ್ನ ಕತೆಯಲ್ಲಿ ರಮೇಶನ ಜೀವನದಲ್ಲಿಯ ಕನಸು ಮತ್ತು ನನಸುಗಳ ನಡುವಿನ ಹೋರಾಟ. ಬಸ್ಸಿಗಾಗಿ ಕಾಯುತ್ತಾ ಕುಳಿತಾಗ ಅವನ ತಲೆಯಲ್ಲಿ ಹರಿದು ಹೋಗುವ ಯೋಚನಾ ಲಹರಿ ಕತೆಗೆ ಮುದ ನೀಡುತ್ತದೆ.
ನಗು ಕತೆಯಲ್ಲಿ ಕಿಟ್ಟು ಮತ್ತು ಶಿಕ್ಷಕಿಯ ನಡುವಿನ ಬಾಂಧವ್ಯ ಮತ್ತು ಪ್ರೀತಿಯ ಕುರುಹು ಅದಮ್ಯವಾದುದು ಎಂದು ಈ ಕತೆಯಲ್ಲಿ ತೋರಿಸಲಾಗಿದೆ.
ಮಳೆಗಾಲದ ಚಿತ್ರ ಕತೆಯಲ್ಲಿ ಮಲೆನಾಡಿನ ಚಿತ್ರಣ ಅದ್ಭುತ. ಅದರ ಜೊತೆಗೆ ಅಲ್ಲಿಯ ಜನರಿಗೆ ಒದಗುವ ಕಷ್ಟ ಕಾರ್ಪಣ್ಯಗಳ ಚಿತ್ರಣ.
ಸಂತೆ ಕತೆಯಲ್ಲಿ ಊರಿನ ಸಂತೆಯ ಚಿತ್ರಣ ಮತ್ತು ಅಲ್ಲಿ ನಡೆಯುವ ಸಂಭಾಷಣೆ. ಸಂತೆ ಪದವನ್ನು ಬೇರೆಯಾಗಿ ಅರ್ಥೈಸಿಕೊಂಡಿರುವ ಜನರು ನಿಜವಾಗಿ ಸಂತೆ ಎಂದರೇನು ಅಂತ ತಿಳಿಯಲು ಕಥಾನಾಯಕ ಹೋದಾಗ ಅವರು ಕಾಣುವ ಆ ಸನ್ನಿವೇಶ, ಕಣ್ಣೋಟವೇ ಈ ಕತೆ.