Yuti 2023

Rangasthe Trust presentsYUTI 2023An amalgamation of South Indian Theatre musicA popular amateur theatre team ‘Rangasthe Trust’ from Bengaluru is organizing a South Indian theatre music festival on account of its 7th year anniversary on 22nd of April, at RAVINDRA KALAKSHETRA. The event includes musical performances by popular theatre teams from several South Indian languages including Telugu, Malayalam, Tamil and Kannada. Nibha Theatre Ensemble will be performing in Telugu language, team Thinai Nila Vaasigal in Tamil followed by Janabheri School of arts and performing studies in Malayalam. Rangasthe’s music team will be perofmring popular theatre songs from kannada language. Team Rangasthe will be faming theatre organizers and facilitators from kannada theatre with Dr H Narasimhaiah memorial honor, who was an Indian physicist, educator, writer, freedom fighter and rationalist from Karnataka who has contributed enormously to Kannada theatre. Rangasthe will be honoring a senior theatre organizer from Gajanana Yuvaka Mandala, Sheshagiri, Shri Prabhu Siddappa Gurappa for the year 2023. The event will take place on April 22nd, Saturday at Ravindra kalakshetra, 6pm onwards.

ರಂಗಾಸ್ಥೆ ಅರ್ಪಿಸುವ

ಯುತಿ 2023

ಬೆಂಗಳೂರಿನ ಪ್ರಸಿದ್ಧ ಹವ್ಯಾಸಿ ರಂಗತಂಡವಾದ ರಂಗಾಸ್ಥೆ ಟ್ರಸ್ಟಿನ ಏಳನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಂಡವು ದಕ್ಷಿಣ ಭಾರತದ ರಂಗ ಸಂಗೀತದ ಸಮ್ಮಿಲನದ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ, ಇದೇ 22 ನೇ ಏಪ್ರಿಲ್, ಶನಿವಾರದಂದು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ತೆಲುಗು ಭಾಷೆಯನ್ನು ಪ್ರತಿನಿಧಿಸಲು ನಿಭಾ ಥಿಯೇಟರ್ ಸಂಘಟಿತ ವಾದ್ಯ ತಂಡ, ತಮಿಳು ಭಾಷೆಯನ್ನು ಪ್ರತಿನಿಧಿಸಲು ತಿನಾಯ್ ನೀಲ ವಾಸಿಗಳ್ ತಂಡವು, ಮಲಯಾಳಂ ಭಾಷೆಯನ್ನು ಪ್ರತಿನಿಧಿಸಲು ಜನಭೇರಿ ಸ್ಕೂಲ್ ಆರ್ಟ್ಸ್ ಅಂಡ್ ಪರ್ಫಾಮಿಂಗ್ ಸ್ಟಡೀಸ್ ತಂಡವು ಹಾಗೂ ಕನ್ನಡದಿಂದ ರಂಗಾಸ್ಥೆ ತಂಡದ ಸದಸ್ಯರು ವಿಶಿಷ್ಟ ರೀತಿಯ ರಂಗ ಸಂಗೀತವನ್ನು ಪ್ರಸ್ತುತಪಡಿಸಲಿದ್ದಾರೆ. ರಂಗಾಸ್ಥೆ ವತಿಯಿಂದ ಪ್ರತಿ ವರ್ಷದಂತೆ ರಂಗಭೂಮಿಯ ಹಿರಿಯ ರಂಗ ಸಂಘಟಕರಿಗೆ ಡಾಕ್ಟರ್ ಹೆಚ್ ನರಸಿಂಹಯ್ಯ ಗೌರವವನ್ನು ನೀಡಲಾಗುತ್ತದೆ. ಈ ಸಾಲಿನ ಗೌರವಕ್ಕೆ ಹಿರಿಯ ಸಂಘಟಕರಾದ ಶ್ರೀ ಗಜಾನನ ಯುವಕ ಮಂಡಲ, ಶೇಷಗಿರಿಯ ಸನ್ಮಾನ್ಯ ಶ್ರೀ ಪ್ರಭು ಸಿದ್ದಪ್ಪ ಗುರಪ್ಪನವರು ಪಾತ್ರರಾಗಿದ್ದಾರೆ.
ಈ ಕಾರ್ಯಕ್ರಮವು ಏಪ್ರಿಲ್ 22 ರಂದು ಸಂಜೆ 6 ಗಂಟೆಗೆ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.